ನಿಮ್ಮ ವೀಕ್ಷಣೆಗಳನ್ನು ದಾಖಲಿಸಿ
ನಿಮ್ಮ ಅನ್ವೇಷಣೆಗಳನ್ನು ಚರ್ಚಿಸಿ
ಮನೆ ಹಿತ್ತಲಿನ ಅತಿ ಸಾಮಾನ್ಯ ಕಳೆಗಿಡದಿಂದ ಹಿಡಿದು ಅತ್ಯಪರೂಪದ ಚಿಟ್ಟೆಗಳ ವರೆಗಿನ ಎಲ್ಲ ವೀಕ್ಷಣೆಗಳು ಜೀವವೈವಿಧ್ಯ ವಿಜ್ಞಾನಕ್ಕೆ ಕೊಡುಗೆಯಾಗಬಲ್ಲದು. ನಾವು ನಿಮ್ಮ ದತ್ತಾಂಶಗಳನ್ನು ಉಪಯುಕ್ತವಾಗಿಸಲು ಹಾಗೂ ಸಂಶೋಧಕರಿಗೆ ಸಹಾಯ ಮಾಡಲು ನಿಮ್ಮ ಅನ್ವೇಷಣೆಗಳನ್ನು ಜಾಗತಿಕ ಜೀವವೈವಿಧ್ಯ ಮಾಹಿತಿ ಸೌಕರ್ಯ ದಂತಹ ವೈಜ್ಞಾನಿಕ ದತ್ತಾಂಶ ಭಂಡಾರದ ಜೊತೆಗೆ ಹಂಚಿಕೊಳ್ಳುತ್ತೇವೆ. ನೀವು ಮಾಡಬೇಕಿರುವುದು ವೀಕ್ಷಣೆಯ ದಾಖಲೆಯಷ್ಟೆ.
ಜೀವಿಗಳ ಜೊತೆಗಿನ ಮುಖಾಮುಖಿಯನ್ನು ದಾಖಲಿಸಿ, ಜೀವಿವೈವಿಧ್ಯದ ಪಟ್ಟಿ ನಿರ್ವಹಿಸಿ, ಇವೆಲ್ಲವನ್ನೂ ಕ್ಲೌಡ್ ನಲ್ಲಿ.
ಜೀವಿಗಳ ಇರುವಿಕೆಯ ಸಮಯ ಹಾಗೂ ತಾಣವನ್ನು ವಿಜ್ಞಾನಿಗಳು ಮತ್ತು ಸಂಪನ್ಮೂಲ ನಿರ್ವಾಹಕರು ಅರಿಯಲು ಸಹಾಯಮಾಡಿ
ನೀವು ವೀಕ್ಷಿಸಿದ ಜೀವಿಗಳನ್ನು ಗುರುತಿಸಬಲ್ಲ ತಜ್ಞರೊಡನೆ ಸಂಪರ್ಕಿಸಿ.
ನಿಮಗೆ ಆಸಕ್ತಿದಾಯಕವಾದ, ನಿರ್ದಿಷ್ಟ ಧ್ಯೇಯವನ್ನು ಹೊಂದಿರುವ ಪ್ರಾಯೋಜನೆಗಳನ್ನು ಹುಡುಕಿ, ಅಥವಾ ನೀವು ನಿಮ್ಮದೇ ಸ್ವಂತದ್ದನ್ನು ಪ್ರಾರಂಭಿಸಿ.
ಇತರೆ ನಿಸರ್ಗಪ್ರೇಮಿಗಳೊಡನೆ ಚರ್ಚಿಸಿ ಮತ್ತು ಇತರರಿಗೆ ಸಹಾಯಮಾಡುವ ಮೂಲಕ ನಿಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಿ.
ಸಾಧ್ಯವಾದಷ್ಟು ಪ್ರಭೇದಗಳನ್ನು ಜನರು ಗುರುತಿಸುವ ಸಲುವಾಗಿ ಒಂದು ಶಿಬಿರವನ್ನು ಆಯೋಜಿಸಿ.